Monday, March 28, 2011

ನಮ್ಮನ್ನು ನಾವು ಅರಿತುಕೊಳ್ಳುವುದೇ ನಮ್ಮ ಮೊದಲ ಗುರಿ, ಮೊದಲ ಕರ್ತವ್ಯ.

ಆಶ್ರಮದ ಬಯಲು ರಂಗ ಮಂದಿರದಲ್ಲಿ ನಡೆದ ಸತ್ಸಂಗದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ೬೫೦೦ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಉನ್ನತ ಧ್ಯಾನ ಶಿಬಿರಾರ್ಥಿಗಳಿಂದ ಏನಾದರೂ ಪ್ರಶ್ನೆಗಳಿವೆಯೇ ಎಂದು ಗುರೂಜಿ ಪ್ರಶ್ನಿಸಿದರು.

ಪ್ರಶ್ನೆ : ನಾವು ಗುರುವಿನೊಂದಿಗೆ ಆಧ್ಯಾತ್ಮಿಕವಾಗಿ ಸಂಪರ್ಕದಲ್ಲಿರುವಾಗ ದೈಹಿಕ ಅಸ್ತಿತ್ವ ನಮ್ಮ ಮೇಲೆ ಯಾವ ಪರಿಣಾಮ ಬೀರಬಲ್ಲದು?
ಶ್ರೀ ಶ್ರೀ ರವಿಶಂಕರ್ : ನನಗೆ ಈ ಬಗ್ಗೆ ಕಲ್ಪನೆಯೇ ಇಲ್ಲ.

ಪ್ರಶ್ನೆ : ಆಧ್ಯಾತ್ಮದ ಹಾದಿಯಲ್ಲಿ ಜ್ಞಾನಕ್ಕೆ ಎಷ್ಟು ಮಹತ್ವವಿದೆ? ಓದು, ಬರಹ ಬಾರದ ವ್ಯಕ್ತಿ ಆಧ್ಯಾತ್ಮದ ಹಾದಿಯಲ್ಲಿ ಸಾಗುವುದೆಂತು?
ಶ್ರೀ ಶ್ರೀ ರವಿಶಂಕರ್ : ಸಾಗಬಹುದು. ಈ ಬಗ್ಗೆ ಅನೇಕ ಉದಾಹರಣೆಗಳು ಈ ದೇಶದಲ್ಲಿವೆ, ಕಬೀರದಾಸರು ಯಾವ ವಿಶ್ವವಿದ್ಯಾನಿಲಯದಲ್ಲೂ ಓದಿರಲಿಲ್ಲ. ಗುರು ನಾನಕದೇವರು........ ಹೀಗೆ ಅನೇಕರಿದ್ದಾರೆ.

ಪ್ರಶ್ನೆ : ಆತ್ಮ ಸಂಗಾತಿಗಳು ಎಂದು ಜನ ಮಾತನಾಡುವುದನ್ನು ಕೇಳಿದ್ದೇನೆ. ಇದು ನಿಜವೇ?. ಗಂಡ ಹೆಂಡತಿಯರು ನಿಜವಾಗಿಯೂ ಆತ್ಮ ಸಂಗಾತಿಗಳೇ?
ಶ್ರೀ ಶ್ರೀ ರವಿಶಂಕರ್ : ಹಾಗಿದ್ದರೆ ಒಳ್ಳೆಯದು. ಪ್ರತಿಯೊಬ್ಬ ಗಂಡ ಅಥವಾ ಹೆಂಡತಿ ಅವರ ಆತ್ಮಗಳನ್ನು ಭೇಟಿಯಾಗಬೇಕು. ಅವರು ಎಲ್ಲರನ್ನೂ ಭೇಟಿಯಾಗುತ್ತಾರೆ. ಆದರೆ ತಮ್ಮ ಆತ್ಮವನ್ನು ಹೊರತಾಗಿ. ತಮ್ಮ ಆತ್ಮವನ್ನು ಅರಿತುಕೊಳ್ಳುವುದು ನಮ್ಮ ಆದ್ಯಕರ್ತವ್ಯ, ಮೊದಲ ಗುರಿ. "ನಾನು ಯಾರು" ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಿ.

ಪ್ರಶ್ನೆ : ದೇವರು ಆಕಾಶ ಮತ್ತು ಕಾಲ ಎನ್ನುವ ಭ್ರಾಂತಿಯನ್ನು ಏಕೆ ಸೃಷ್ಟಿಸಿದ?
ಶ್ರೀ ಶ್ರೀ ರವಿಶಂಕರ್ : ಕೇವಲ ಮೋಜಿಗಾಗಿ.


ಪ್ರಶ್ನೆ : ಗುರೂಜಿ, ನಾನು ನಿಮಗೆ ಯಾವ ಉಡುಗೊರೆ ನೀಡಲಿ? ಉನ್ನತ ಧ್ಯಾನ ಶಿಬಿರದಲ್ಲಿ ಭಾಗವಹಿಸಿ ನಾನು ಶ್ರೀಮಂತ ಅನುಭವದೊಡನೆ ಮರಳುತ್ತಿದ್ದೇನೆ.
ಶ್ರೀ ಶ್ರೀ ರವಿಶಂಕರ್ : ನಿಮ್ಮ ನೆರೆಹೊರೆಯ ಜನರಿಗೆ ಶಾಂತಿ ಜ್ಞಾನ ಹಾಗೂ ಆಧ್ಯಾತ್ಮವನ್ನು ತಲುಪಿಸಿರಿ. ಇತ್ತೀಚೆಗೆ ನಾವು ಕೆನಡಾದಿಂದ ಅಮೇರಿಕಾ ದೇಶಕ್ಕೆ ಪ್ರಯಣ ಮಾಡುತ್ತಿದ್ದೆವು. ಅಲ್ಲಿ ಭದ್ರತಾಸಿಬ್ಬಂದಿಯೊಬ್ಬ ನಮ್ಮ ಬಳಿಗೆ ಓಡೋಡಿ ಬಂದು 'ಮೌನದ ಮಾರ್ದನಿ' ಪುಸ್ತಕವನ್ನು ತೋರಿಸುತ್ತಾ "ಇದನ್ನು ಬರೆದವರು ನೀವೇನಾ?" ಎಂದು ಕೇಳಿದ. ನಾವು 'ಹೌದು' ಎಂದು ಉತ್ತರಿಸಿದೆವು. ಆತ "ಯಾರೋ ಒಬ್ಬರು ಈ ಪುಸ್ತಕವನ್ನು ಆರು ತಿಂಗಳ ಹಿಂದೆ ನನಗೆ ನೀಡಿದರು. ಇದನ್ನು ಓದಿದ ನಂತರ ನನ್ನ ಜೀವನವೇ ಬದಲಾಗಿದೆ. ನಾನು ಇದನ್ನು ಯಾವಾಗಲೂ ನನ್ನ ಬಳಿಯೇ ಇಟ್ಟುಕೊಂಡಿರುತ್ತೇನೆ." ಎಂದು ತನ್ನ ಅನುಭವವನ್ನು ಹೇಳಿಕೊಂಡ. ಆತ ಸುದರ್ಶನ ಕ್ರಿಯೆಯನ್ನು ಅದುವರೆಗೂ ಮಾಡಿರಲಿಲ್ಲ. ಜ್ಞಾನವು ಎಲ್ಲರಿಗೂ ದಕ್ಕಬೇಕು. ಯಾರಿಗೆ ಯಾವಾಗ ಜ್ಞಾನದ ಅವಶ್ಯಕತೆ ಬರುತ್ತದೆ ಎಂದು ಹೇಳಲು ಬರುವುದಿಲ್ಲ.

ಪ್ರಶ್ನೆ : "ಎಲ್ಲವನ್ನು ಬಿಟ್ಟುಬಿಡಿ" ಎಂದು ಹೇಳುವುದರ ಅರ್ಥವೇನು? ಒಂದು ದೀರ್ಘವಾದ ಉಸಿರನ್ನು ಎಳೆದುಕೊಂಡು ಹಾಗೆಯೇ ಹಿಡಿದಿರಿಸಿಕೊಳ್ಳಿ ಆಗ ನಿಮಗೆ ಗೊತ್ತಾಗುತ್ತದೆ. (ಸಭಿಕರು ಚಪ್ಪಳೆ ಮತ್ತು ಹರ್ಷೊದ್ಗಾರ ಮಾಡುತ್ತಾರೆ) ಕೈಗಳನ್ನು ಮುಷ್ಟಿಮಾಡಿ, ಹಾಗೆಯೇ ಹಿಡಿದಿಟ್ಟುಕೊಳ್ಳಿ ಆಗ ಗೊತ್ತಾಗುತ್ತದೆ.

ಪ್ರಶ್ನೆ : ಒಂದು ಧರ್ಮದಲ್ಲಿ ನಾವು ಈ ಜಗತ್ತಿನಲ್ಲಿ ಅದೆಷ್ಟು ಬಾರಿ ಜನ್ಮತಾಳಿದ್ದೇವೆಂದರೆ ನಾವು ಈ ಸಾಗರದಲ್ಲಿರುವ ನೀರಿನಷ್ಟು ಪ್ರಮಾಣದಲ್ಲಿ ತಾಯಿಯ ಹಾಲನ್ನು ಕುಡಿದಿದ್ದೇವೆ ಎಂದು ಹೇಳುತ್ತಾರೆ. ಇದು ಉತ್ಪ್ರೇಕ್ಷೆಯಲ್ಲವೆ? ನಾವು ನಿಜಕ್ಕೂಅಶ್ತು ಬಾರಿ ಈ ಜಗತ್ತಿಗೆ ಬಂದಿದ್ದೇವೆಯೆ?
ಶ್ರೀ ಶ್ರೀ ರವಿಶಂಕರ್ : ಅಂತಹ ಮಾತುಗಳನ್ನು ಅಲಕ್ಷಿಸಿ. ನೀವು ಎಷ್ಟು ಕುಡಿದಿದ್ದೀರಿ ಎಂದು ಲೆಕ್ಕವಿಟ್ಟವರಾರು? ಅದಕ್ಕಿಂತ ಒಳ್ಳೆಯ ಕೆಲಸವಿದೆ. ಪ್ರತಿದಿನ ನೀವು ಮೂರು ಲೀಟರ್ ನೀರು ಕುಡಿಯುತ್ತೀರಿ. ವರ್ಷಕ್ಕೆ ೧೨೦೦ ಲೀಟರ್ ಆಗುತ್ತದೆ. ಇದು ಕನಿಷ್ಠ ಅಂದಾಜು. ನಲುವತ್ತು ವರ್ಷದ ವ್ಯಕ್ತಿ ಎಷ್ಟು ಗ್ಯಾಲನ್ ನೀರು ಕುಡಿದಿರಬಹುದು ಯೊಚಿಸಿ. ಎಷ್ಟು ಬಾರಿ ಆಹಾರ ಸೇವಿಸಿರಬಹುದು ಊಹಿಸಿ. ಒಂದು ಜೀವನದಲ್ಲಿ ಇಷ್ಟು ಅಗಾಧ ಪ್ರಮಾಣವಿರುವಾಗ ಬೇರೆ ಜನ್ಮಗಳ ಚಿಂತೆ ನಿಮಗೇಕೆ?

ಪ್ರಶ್ನೆ : ದೇವರ ಮೂರ್ತಿಗೆ ಮಾನಸ ಪೂಜೆ ಮಾದಿದರೆ ಸಾಕೆ ಅಥವಾ ನಿಜವಾಗಿಯೂ ಪೂಜೆ ಮಾಡಬೇಕೆ?
ಶ್ರೀ ಶ್ರೀ ರವಿಶಂಕರ್ : ಪೂಜಾ ಎಂದರೆ ಪರಿಪೂರ್ಣತೆಯಿಂದ ಜನಿಸಿದುದು ಎಂದರ್ಥ (ಪೂ = ಪರಿಪೂರ್ಣತೆ, ಜಾ = ಜನಿಸಿದುದು). ನೀವು ಒಳ್ಳೆಯವರಾಗಿರುವುದೇ ಪೂಜೆ. ಒಂದು ಹೂ, ಒಂದು ಮುಗುಳ್ನಗೆಯನ್ನು ಅರ್ಪಿಸಿ ಅಷ್ಟೇಸಾಕು. ಸೇವೆಯೇ ಪೂಜೆ. ಜನಸೇವೆಯೇ ಜನಾರ್ದನ ಸೇವೆ.

ಪ್ರಶ್ನೆ : ವಿವಾಹದ ಧರ್ಮ ಯಾವುದು?     
ಶ್ರೀ ಶ್ರೀ ರವಿಶಂಕರ್ : ನಿಮ್ಮ ಸಂಗಾತಿಯನ್ನು ಕೇಳಿ! ನಿಮ್ಮ ಧರ್ಮ ಏನು? ನೀವು ಏನು ಮಾಡಬೇಕು ಎಂದು ದೊಡ್ಡ ಭಾಷಣವನ್ನೇ ಬಿಗಿಯುತ್ತಾರೆ. (ಸಭಾಂಗಣದ ತುಂಬ ನಗು)
ನಮ್ಮ ಪೂರ್ವಿಕರು ಸಪ್ತಪದಿಯ ಕುರಿತು ಹೇಳಿದ್ದಾರೆ. ಸಾವಿರ ವರ್ಷಗಳ ಹಿಂದೆಯೂ ಈ ಜ್ಞಾನ ಪ್ರಚಲಿತವಾಗಿತ್ತು. ನಿಷ್ಠೆ, ಸಹಕಾರ, ಕರುಣೆ, ಪರಿಪಾಲನೆ, ಅಹಂಕಾರವಿಲ್ಲದಿರುವುದು - ಇವೆಲ್ಲವೂ ವಿವಾಹ ಧರ್ಮದ ಪರಿಪಾಲನೆಯ ಲಾಭಗಳು.

ಪ್ರಶ್ನೆ : ನಾನು ಒಬ್ಬ ಜ್ಯೋತಿಷಿಯ ಹತ್ತಿರ ಹೊದಾಗ ಅವರು ದುಷ್ಟ ಶಕ್ತಿಗಳ ನಿವಾರಣೆಗಾಗಿ ಕೆಲವು ಉಪಾಯಗಳನ್ನು ಸೂಚಿಸಿದರು.
ಶ್ರೀ ಶ್ರೀ ರವಿಶಂಕರ್ : " ಓಮ್ ನಮಃಶಿವಾಯ " ಎನ್ನುವ ಪಂಚಕ್ಷರಿ ಮಂತ್ರವನ್ನು ಜಪಿಸಿರಿ. ಇದೇ ಉತ್ತಮ ಪರಿಹಾರ. ಸ್ವಲ್ಪ ಪೂಜೆಯನ್ನು ಮಾಡಿ ಪರವಾಗಿಲ್ಲ. ಆದರೆ ಇವುಗಳ ಮೇಲೆ ತುಂಬಾ ಹಣ ಖರ್ಚು ಮಾಡಬೇಡಿ. ಹೃದಯ ಪೂರ್ವಕವಾಗಿ ಸೇವೆಯಲ್ಲಿ ನಿರತರಾಗಿರಿ. ಜಪ ಮತ್ತು ಧಾನದಿಂದ ನಿಮಗೆ ನಿಜಕ್ಕೂ ಸಹಾಯ ದೊರೆಯುತ್ತದೆ.

ಪ್ರಶ್ನೆ : ನಾನು ಆಧ್ಯಾತ್ಮದ ಹಾದಿಯಲ್ಲಿ ಅನೇಕ ವರ್ಷಗಳಿಂದ ಇದ್ದರೂ ನನಗಿಂತ ನಂತರ ಬಂದವರು ನನ್ನಿಂದ ಮುಂದೆ ಹೋಗಿದ್ದಾರೆ, ನಾನು ಯಾವ ಜವಾಬ್ದಾರಿಯನ್ನೂ ತೆಗೆದುಕೊಳ್ಳುತ್ತಿಲ್ಲ.
ಶ್ರೀ ಶ್ರೀ ರವಿಶಂಕರ್ : ಅದೇ ಮುಖ್ಯ ಕಾರಣ, ನಿಮಗೆ ಜವಾಬ್ದಾರಿ ತೆಗೆದುಕೊಳ್ಳಲು ಹಿಂಜರಿಕೆಯಿದೆ. ಎಲ್ಲ ಸಂದಿಗ್ಧತೆಯಿಂದ ಹೊರಬಂದು ಜವಾಬ್ದಾರಿ ತೆಗೆದುಕೊಳ್ಳಿ. ಧೈರ್ಯ, ನಂಬಿಕೆ ಹಾಗೂ ಆತ್ಮವಿಶ್ವಾಸವಿರಲಿ. ನಿಮ್ಮ ಕೆಲಸ ಸಾಗುತ್ತದೆ.

ಪ್ರಶ್ನೆ : ಒಳ್ಳೆಯವರಿಗೇಕೆ ಕಷ್ಟ ಬರುತ್ತದೆ? ಕರ್ಮವೇ ಇದಕ್ಕೆ ಕಾರಣವೇ?
ಶ್ರೀ ಶ್ರೀ ರವಿಶಂಕರ್ : ನಿಜ, ನಿಜ. ಅವರು ತಮ್ಮ ಮೂರ್ಖತೆಯ ಕಾರಣದಿಂದಲೂ ತೊಂದರೆಗೊಳಗಾಗುತ್ತಾರೆ. ಒಳ್ಳೆಯವರಾಗಿದ್ದರೆ ಸಾಲದು. ಇದು ನಿಮ್ಮ ಬೆರಳನ್ನು ಬೆಂಕಿಯೊಳಗಿಟ್ಟು "ಬೆಂಕಿ ನನ್ನನ್ನೇಕೆ ಸುಟ್ಟಿತು" ಎಂದು ಕೇಳಿದಂತೆ. ನೇವು ಚಾತುರ್ಯ ಹಾಗೂ ಬುದ್ದಿವಂತಿಕೆಯಿಂದ ನದೆದುಕೊಳ್ಳಬೇಕು. ಜ್ಞಾನವನ್ನು ಸಂಪದಿಸಿದಾಗ ನಿಮಗೆ ಸಂತೋಷ ಹಾಗೂ ತೃಪ್ತಿ ಉಂಟಾಗುತ್ತದೆ. ಭಜನೆ, ಧ್ಯಾನ ಹಾಗೂ ಜ್ಞಾನಾರ್ಜನೆಯಲ್ಲಿ ಏಕಗ್ರತೆಯಿರಲಿ.

ಪ್ರಶ್ನೆ : ಬದುಕಿನಲ್ಲಿ ಮದುವೆ ಮಹತ್ವವಾದುದೆ?
ಶ್ರೀ ಶ್ರೀ ರವಿಶಂಕರ್ : ಅದನ್ನು ನೀವೇ ನಿರ್ಧರಿಸಬೇಕು. ಒಟ್ಟಾರೆ ನೀವು ಶಾಂತರಾಗಿರುವುದೇ ಮುಖ್ಯ. ಮದುವೆಯಾದವರಿಗೂ ಸಮಸ್ಯೆಗಳಿರುತ್ತವೆ. ಮದುವೆಯಾಗಲಿ, ಇಲ್ಲದಿರಲಿ, ಸಂತೊಷ, ಉಲ್ಲಾಸಗಳೇ ಜೀವನದಲ್ಲಿ ಮುಖ್ಯ, ತಿಳಿಯಿತೇ?
( ಒಬ್ಬ ಹತ್ತು ವರ್ಷದ ಹುಡುಗ ಎದ್ದು ಪ್ರಶ್ನೆ ಕೇಳುತ್ತಾನೆ )

ಪ್ರಶ್ನೆ : ಮುಂದಿನ ಪೀಳಿಗೆಗೆ ನೀವು ನೀಡುವ ಸಂದೇಶವೇನು?
ಶ್ರೀ ಶ್ರೀ ರವಿಶಂಕರ್ : ಚೆನ್ನಗಿ ವಿಧ್ಯಾಭ್ಯಾಸ ಮಾಡಿ, ಯಶಸ್ಸುಗಳಿಸಿ. ದಿನಕ್ಕೊಬ್ಬರ ಗೆಳೆತನ ಬೆಳೆಸಿಕೊಳ್ಳಿ.
ಆಶ್ರಮದಲ್ಲಿ ನಡೆಯುತ್ತಿದ್ದ "ಆರ್ಟ್ ಎಕ್ಸೆಲ್"ನ ಬಾಲ ಶಿಬಿರಾರ್ಥಿಗಳು ಒಂದು ಪುಟ್ಟ ಪ್ರಹಸನವನ್ನು ಆಡಿ ತೋರಿಸಿದರು. ಆಂಧ್ರಪ್ರದೇಶದ ೧೪೦೦ಕ್ಕೂ ಹೆಚ್ಚು ಜನ ಯುವಾಚಾರ್ಯರು ಸತ್ಸಂಗದಲ್ಲಿ ಭಾಗವಹಿಸಿದ್ದರು. ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡರು. 'ಸೆಲೆಬ್ರೇಟಿಂಗ್ ಸೈಲೆನ್ಸ್'ನ ಉರ್ದು ಭಾಷಾಂತರವನ್ನು ಗುರೂಜಿಯವರು ಬಿಡುಗಡೆ ಮಾಡಿದರು. ಈ ಪುಸ್ತಕವನ್ನು ಪಾಕಿಸ್ತಾನ, ಲಕ್ನೋ, ಹೈದರಾಬಾದ್ ಮತ್ತು ಲಾಹೋರ್ ಮುಂತಾದ ವಿವಿಧ ಭಾಗಗಳಿಗೆ ಕೊಂಡೊಯ್ದು ಪರಿಚಯಿಸಿರಿ. ಇದರಿಂದ "ಎರಡೂ ದೇಶಗಳಲ್ಲಿ ಶಾಂತಿ ನೆಲೆಸಬಹುದು. ಈ ಜ್ಞಾನದಿಂದ ಭಯೋತ್ಪಾದನೆಯನ್ನು ನಿಲ್ಲಿಸಬಹುದು" ಎಂದು ಗುರೂಜಿ ಹೇಳಿದರು.

Sunday, March 27, 2011

ಈ ವರ್ಷ ಒಂದು ಆಧ್ಯಾತ್ಮಿಕ ಗುರಿಯನ್ನು ಇರಿಸಿಕೊಳ್ಳಿ

ಯುಗಾದಿಯ ಹಬ್ಬದ ದಿನದಂದು ಗುರೂಜಿಯವರು ನೀಡಿದ ಸಂದೇಶ.
ಬೆಂಗಳೂರು ಆಶ್ರಮ, ಮಾರ್ಚ್ ೨೭ ( ಶುಕ್ರವಾರ ) ಮಧ್ಯಾಹ್ನ ೧೨ ಗಂಟೆ:
೫೧೧೦ ನೇ ವರ್ಷವನ್ನು ಪ್ರವೇಷಿಸುತ್ತಿರುವ ಈ ದಿನದಂದು ಎಲ್ಲರಿಗೂ ಹೊಸವರ್ಷದ ಶುಭಾಶಯಗಳು..... ಈ ಪೃಥ್ವಿಯ ಉಗಮವಾಗಿ ೧೯೭೨೯೪೯೧೦೦ ವರ್ಷಗಳಾಗಿವೆ. ಪ್ರತಿಯೊಂದು ವರ್ಷಕ್ಕೂ ಒಂದೊಂದು ಹೆಸರು. ಈ ವರ್ಷದ ಹೆಸರು ವಿರೋಧಿ. ಈ ವರ್ಷ ಜನರು ಪರಸ್ಪರ ಕಾದಾಡುವ ಸಂಭವ ಜಾಸ್ತಿ.

ಅಂತರ್ಮುಖಿ ಸದಾಸುಖಿ. ನಿಮ್ಮೊಳಗೆ ಇಣುಕಿನೋಡಿ, ಸಂತೋಷ ನಿಮ್ಮೊಳಗೇ ಇದೆ.
ಈ ವರ್ಷ ಶುಭವಾಗುತ್ತದೆ. ಭಕ್ತನಿಗೆ ಎಲ್ಲ ಕಾಲದಲ್ಲಿಯೂ ಶುಭವೇ ಆಗುತ್ತಿರುತ್ತದೆ. ಅವನಿಗೆ ಎಲ್ಲಾ ಕಾಲವೂ ವಿಕಾಸಕ್ಕೆ ಅನುಕೂಲ. ಇದು ನಮ್ಮನ್ನು ಇನ್ನೂ ಎತ್ತರದ ಆಯಮಕ್ಕೆ ಕೊಂಡೊಯ್ಯಲು ಸಕಾಲ.

ಆಗುವುದೆಲ್ಲ ಒಳ್ಳೆಯದಕ್ಕೆ, ಓಂ ನಮಃ ಶಿವಾಯ ಮಂತ್ರ ಜಪಿಸುತ್ತಿರಿ. ಧ್ಯಾನವೂ ಪ್ರಮುಖವಾದುದು. ನಿಮ್ಮಲ್ಲಿ ಶೇಕಡ ಒಂದರಷ್ಟು ಜನ ಧ್ಯಾನಮಾಡಿದರೂ ಅದರಿಂದ ಉಳಿದ ಶೇ. ೯೯ ಜನರಿಗೆ ಒಳ್ಳೆಯದಾಗುತ್ತದೆ. ಈ ವರ್ಷ ಪ್ರತಿಯೊಬ್ಬರೂ ಧ್ಯಾನ ಮಾಡಬೇಕು, ಸತ್ಸಂಗದಲ್ಲಿ ನಿರತರಾಗಬೇಕು. ನಿಮ್ಮ ಆಧ್ಯಾತ್ಮಿಕತೆಯಿಂದ ಉಳಿದವರಿಗೆ ಒಳಿತಾಗುತ್ತದೆ. ಇದು ನಿಮ್ಮ ಈ ವರ್ಷದ ಆಧ್ಯಾತ್ಮಿಕ ಗುರಿ. ಭೌತಿಕವಾದ ಗುರಿಗಳನ್ನು ಬದಿಗೆ ಸರಿಸಿ ಧ್ಯಾನಮಾಡಿ, ಸತ್ಸಂಗ ಮಾಡಿ, ಜ್ಞಾನದ ತುಣುಕುಗಳನ್ನು ಮನನ ಮಾಡಿ. ಇದರಿಂದ ನೀವು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದಂತಾಗುತ್ತದೆ. ಯುಗಾದಿಯಂದು ಜನರು ಬೇವು ಮತ್ತು ಬೆಲ್ಲವನ್ನು ಸೇವಿಸುತ್ತಾರೆ. ಜೀವನವು ಸಿಹಿ ಕಹಿಗಳ ಮಿಶ್ರಣವೆಂಬುದರ ಸಂಕೇತವಿದು.

Thursday, February 10, 2011

ಬುಧವಾರ ಮಾರ್ಚ್ ೨೪, ೨೦೦೯

ಬೇಸುವ ತಂಗಾಳಿ ಮಧುರವಾಗಿರಲಿ,
ಸಾಗರಗಳಿಂದ ಮಧು ಹೊರಹೊಮ್ಮಲಿ,

ಸಮಸ್ತ ವನಸ್ಪತಿಗಳೂ ನಮಗೆ ಅನುಕೂಲಕರವಾಗಲಿ
ರಾತ್ರಿಗಳು ಸಿಹಿಯಾಗಿರಲಿ, ಹಗಲುಗಳೂ ಸಿಹಿಯಾಗಿರಲಿ
ಈ ಭೂಮಂಡಲ ಕಣಕಣವೂ ನಮಗೆ ಸವಿಯಾಗಿರಲಿ
ಪರಲೋಕಗಳು, ಪಿತೃಗಳು ನಮಗೆ ಅನುಕೂಲಕರವಾಗಿರಲಿ
ಸಮಸ್ತ ಸಸ್ಯರಾಶಿಗಳೂ ಜೇನು ತುಂಬಿ ತುಳುಕಲಿ
ಸೂರ್ಯನೂ ಸಿಹಿಯಾಗಿರಲಿ,

ನಮ್ಮನ್ನು ಸ್ಪರ್ಶಿಸುವ ಎಲ್ಲ ವಿಕಿರಣಗಳೂ ನಮ್ಮನ್ನು ಪ್ರೀತಿಸಲಿ,
ಎಲ್ಲ ಪ್ರಾಣಿಗಳೂ ನಮಗೆ ಪ್ರಿಯವಾಗಲಿ
ನಮ್ಮ ಅನ್ನವು ಸಿಹಿಯಾಗಿರಲಿ
ನಮ್ಮ ಎಲ್ಲ ಯೋಚನೆಗಳೂ, ಮಾತುಗಳೂ
ಜೇನಿನಂತೆ ಮಧುರವಾಗಿರಲಿ
ನಮ್ಮ ಜೀವನ ಪರಿಶುದ್ಧವಾಗಿರಲಿ, ದಿವ್ಯವಾಗಿರಲಿ
ಜೀವನವು ಜೇನಿನಂತೆ ಮಧುರವಾಗಿರಲಿ.
                          - ಶ್ರೀ ಶ್ರೀ ರವಿಶಂಕರ್

ಕಿಟಕಿಯ ಬಾಗಿಲುಗಳು

ಸೋಮವಾರ ಮಾರ್ಚ್ ೨೩, ೨೦೦೯

ನಿಮ್ಮ ಮನಸ್ಸಿನ ಕಿಟಕಿಗಳನ್ನು ತೆರೆಯುವ ಮತ್ತು ಮುಚ್ಚುವ ನಿಮ್ಮ ಸಾಮರ್ಥ್ಯದ ಮೇಲೆ ಅರಿವಿನ ಪ್ರಮಾಣ ಅವಲಂಬಿತವಾಗಿರುತ್ತದೆ. ದೊಡ್ಡ ಬಿರುಗಾಳಿ ಕಾಣಿಸಿಕೊಂಡಾಗ ಕಿಟಕಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಒಳಗಿದ್ದರೂ ನೀವು ಒದ್ದೆಯಾಗುತ್ತೀರಿ. ಒಳಗೆ ಬಿಸಿಯಾಗಿದ್ದು ಉಸಿರು ಕಟ್ಟತೊಡಗಿದರೆ ಬಾಗಿಲುಗಳನ್ನು ತೆರೆಯಬೇಕು.

ನಿಮ್ಮ ಇಂದ್ರಿಯಗಳು ಕಿಟಕಿಗಳಂತೆ. ನೀವು ಎಚ್ಚರವಾಗಿರುವಾಗ ನಿಮ್ಮ ಇಚ್ಛೆಯಂತೆ ತೆರೆಯಲು ಅಥವಾ ಮುಚ್ಚಲು ಸಾಧ್ಯವಾಗದಿದ್ದರೆ ನೀವು ಬಂಧನಕ್ಕೊಳಗಾಗಿರುತ್ತೀರಿ. ಇದನ್ನು ಸಾಧನೆ ಹಾಗೂ ಆಧ್ಯಾತ್ಮಿಕ ಆಚರಣೆಗಳ ಮೂಲಕ ಸಾಧಿಸಬಹುದು.

ನೀವು ಎಷ್ಟರ ಮಟ್ಟಿಗೆ ಎಚ್ಚರದಲ್ಲಿರುತ್ತೀರೊ, ಅಲ್ಲಿಯವರೆಗೆ ನಿಮ್ಮ ನೆರೆಹೊರೆಯ ಎಲ್ಲವೂ ನಿಮಗೆ ಜ್ಞಾನವನ್ನು ಕೊಡುತ್ತವೆ. ನೀವು ಎಚ್ಚರವಾಗಿಲ್ಲದಿದ್ದರೆ ಎಂತಹ ಉತ್ಕೃಷ್ಟ ಜ್ಞಾನದಿಂದಲೂ ಏನೂ ಪ್ರಯೋಜನವಾಗುವುದಿಲ್ಲ.

ನಿಷ್ಠೆ

ಶನಿವಾರ ಮಾರ್ಚ್ ೨೧, ೨೦೦೯

ಪ್ರಬುದ್ಧವಾದ ಹಾಗೂ ಸುಸಂಬದ್ಧ ಮನಸ್ಸು ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತದೆ. ಪ್ರಜ್ಞೆಯ ಅವಿಭಾಜಿತ ಸಮಗ್ರತೆಯನ್ನು ಮನಸ್ಸಿನ ಸಮೃದ್ಧಿಯನ್ನು ನಿಷ್ಠೆ ಸೂಚಿಸುತ್ತದೆ. ಮನಸ್ಸು ಏಕಾಗ್ರವಾಗಿರುವಾಗ ಅದು ಉದ್ರೇಕಗೊಂಡಿರುತ್ತದೆ, ಮೋಸ ಮಾಡುತ್ತದೆ, ಸಮಯ ಸಾಧಕವಾಗುತ್ತದೆ.

ಸಮಯ ಸಾಧಕ ಪ್ರವೃತ್ತಿಯಿಂದ ನಿಷ್ಠಾಹೀನತೆ ಉಂಟಾಗುತ್ತದೆ. ತನ್ನ ವಿಧಿಯ ಬಗ್ಗೆ ದೂರದೃಷ್ಠಿಯಿಲ್ಲದಿರುವುದೇ ಸಮಸಾಧಕತನ. ಆರೋಗ್ಯವಾಗಿರಬೇಕಾದರೆ ಪ್ರಾಮಾಣಿಕತೆ ಹಾಗೂ ಏಕಾಗ್ರತೆ ಎರಡೂ ಬೇಕು. ಮನಸ್ಸು ಒಡೆದಾಗ ಭ್ರಮೆ ಮುಂತಾದ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳು ಹಚ್ಚಿಕೊಳ್ಳುತ್ತವೆ. ನಿಷ್ಠೆಯೇ ನಿಜವಾದ ಸಾಮರ್ಥ್ಯ. ಇದಕ್ಕೆ ಪ್ರಕೃತಿಯಿಂದಲೂ ಸೂಕ್ತ ಸಹಾಯ ಕಾಲಾಂತರದಲ್ಲಿ ಓದಗಿಬರುತ್ತದೆ.

ಭಯ ಹಾಗೂ ಮಹತ್ವಾಕಾಂಕ್ಷೆಗಳು ನಿಷ್ಠೆಗೆ ಎದುರಾಗುವ ತೊಂದರೆಗಳು ಭೌತಿಕ ಹಾಗೂ ಆಧ್ಯಾತ್ಮಿಕ ಸ್ತರಗಳಲ್ಲಿ ನಿಷ್ಠೆ ಅಗತ್ಯ. ಯಾವುದೇ ಸಂಸ್ಥೆಯನ್ನು, ಸಮಾಜವನ್ನು ನಾಶಮಾಡಲು, ಕಟ್ಟಲು, ಕಾಪಾಡಲು ನಿಷ್ಠೆ ಅಗತ್ಯ.

ನಿಮ್ಮ ಬದ್ಧತೆಗಳ ಪ್ರಸ್ತುತೆಯ ಬಗ್ಗೆ ನಿಮ್ಮ ನಂಬಿಕೆಯೇ ನಿಷ್ಠೆ . ಬದ್ಧತೆಗಳನ್ನು ಗೌರವಿಸಿ ಕರ್ಯಗತ ಮಾಡುವುದು ನಿಷ್ಠೆ. ಇದು ನಿಮ್ಮನ್ನು ಬಯಕೆ ಹಾಗೂ ಹೇವರಿಕೆಗಳ ದ್ವಂದ್ವದಿಂದ ಪಾರುಮಾಡುತ್ತದೆ.
ಜವಾಬ್ದಾರಿ, ಸಮರ್ಪಣೆ ಮತ್ತು ಬದ್ಧತೆಗಳು ನಿಷ್ಠೆಯ ಮೂರು ಕಾರಣಗಳು.

ನಿಷ್ಠಾವಂತ ಮನಸ್ಸು ಹೌದು ಎನ್ನುತ್ತದೆ. ಪ್ರಶ್ನೆಗಳನ್ನು ಕೇಳುವ ಉದ್ದೇಶ ಉತ್ತರಗಳನ್ನು ಪಡೆಯುವುದು. ಎಲ್ಲ ಉತ್ತರಗಳ ಮೂಲ ಉದ್ದೆಶ ಹೌದು ಎನ್ನಿಸುವುದು.

ಹೌದು ಎನ್ನುವುದು ಜ್ಞಾನದ ಗುರುತು. ಹೌದು ಎನ್ನುವ ಮನಸ್ಸು ಮೌನವಾಗಿರುತ್ತದೆ. ಇದು ಆನಂದಮಯ ಮನಸ್ಸು ಇಲ್ಲ ಎನ್ನುವ ಸಂಘರ್ಷ ಮಾಡುತ್ತಿರುತ್ತದೆ. ಅನುಮಾನಿಸುತ್ತದೆ, ದುಃಖಿಯಾಗಿರುತ್ತದೆ. ನಿಷ್ಠೆಯು 'ಹೌದು' ಎನ್ನುವ ಮನಸ್ಸಿನಿಂದ ಪ್ರಾರಂಭವಾಗಿ ಇಲ್ಲ ಎನ್ನುವ ಮನಸ್ಸನ್ನು ನಾಶಮಾಡಲು ತೊಡಗುತ್ತದೆ.